ಕನ್ನಡಿಗರನ್ನ ಅವಾಚ್ಯವಾಗಿ ನಿಂದಿಸಿರುವ ರಮೇಶ್ ಜಾರಕಿ ಹೋಳಿ.

ಬೆಂಗಳೂರು: ಸಚಿವ ರಮೇಶ್ ಜಾರಕಿ ಹೋಳಿ ಯುವತಿಯೊಂದಿಗಿನ ರಾಸಲೀಲೆ ವಿಡಿಯೋ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಯುವತಿಯೊಂದಿಗೆ ನಡೆಸಿರುವ ಸಂಭಾಷಣೆಗಳು ತೀವ್ರ ಸ್ವರೂಪವನ್ನ ಪಡೆದುಕೊಳ್ಳುತ್ತಿದೆ.

ಸಚಿವ ರಮೇಶ್ ಜಾರಕಿ ಹೋಳಿ ಯುವತಿಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ರಾಜ್ಯದ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ನಾನು ಸಿಎಂ ಆಗ್ಬೇಕು ಅಲ್ಲಿವರೆಗೆ ನಂಗೇ ನಿದ್ದೇನೆ ಬರಲ್ಲ ಎಂದು ಹೇಳಿದ್ದು ಸಿಎಂ ಸೀಟಿಗೆ ಪ್ರಯತ್ನಿಸುತ್ತಿರುವುದು ಬಹಿರಂಗವಾಗಿದೆ. ಇದು ಸಿ ಎಂ ಯಡಿಯೂರಪ್ಪ ಅವರನ್ನ ಕೆರಳಿಸದೇ ಇರುತ್ತದೆಯೇ.

ಇಷ್ಟೇ ಆಗಿದ್ರೆ ಪರವಾಗಿಲ್ಲ ಬೆಳಗಾವಿ… ಜಿಲ್ಲೆ ಅಲ್ಲಾ… ರಾಜ್ಯ ಎಂದು ರಾಜದ್ರೋಹಿ ಹೇಳಿಕೆಯನ್ನ ನೀಡಿದ್ದಾರೆ. ಜೊತೆಗೆ ಕನ್ನಡಿಗರಿಗೆ ಬೇರೆ ಕೆಲ್ಸ ಇಲ್ಲಾ ಬೊ… ಮಕ್ಳಿಗೆ ಎಂದು ಅವಾಚ್ಯವಾಗಿ ನಿಂದಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕನ್ನಡಿಗರು, ಹಾಗೂ ಮರಾಠಿಗರ ಮತವನ್ನ ಪಡೆದು ಅಧಿಕಾರಕ್ಕೆ ಬಂದಿರುವ ಜಾರಕಿ ಹೋಳಿ ಕನ್ನಡಿಗರನ್ನೆ ಅವಮಾನಿಸಿದ್ದಾರೆ. ಅವರನ್ನ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

error: Content is protected !!