ಗೃಹಿಣಿಗೆ ಒಲಿದ ಲಕ್ಷ್ಮೀ: ನೂರು ರೂ. ಲಾಟರಿಯಲ್ಲಿ ಬಂತು ಕೋಟಿ ಹಣ.

ಅಮೃತಸರ : ನೂರು ರೂಪಾಯಿ ಕೊಟ್ಟು ಖರೀದಿಸಿದ್ದ ಲಾಟರಿಯಿಂದ ಅದೃಷ್ಟ ಖುಲಾಯಿಸಿ ಅಮೃತಸರದಲ್ಲಿ ಗೃಹಿಣಿಯೊಬ್ಬರು ದಿಢೀರನೆ ಕೋಟ್ಯಧಿಪತಿಯಾಗಿದ್ದಾರೆ.

ನೂರು ರೂಪಾಯಿ ಬೆಲೆಯ ಒಂದು ಲಾಟರಿ ಟಿಕೆಟ್ ಗೆ ಒಂದು ಕೋಟಿ ರೂಪಾಯಿಯ ಮೊದಲ ಬಹುಮಾನ ಬಂದಿದೆ. ಅಮೃತಸರದ ಗೃಹಿಣಿ ರೇಣು ಚೌಹಾಣ್ಗೆ ಅದೃಷ್ಟ ಒಲಿದುಬಂದಿದೆ. ಗುರುವಾರ ಲಾಟರಿ ಟಿಕೆಟ್ ಅನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿದ ರೇಣು ಅವರು ರಾಜ್ಯ ಲಾಟರಿ ಇಲಾಖೆಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರೇಣು ಅವರು, ಹಣ ನಮ್ಮ ಮಧ್ಯಮ ವರ್ಗದ ಕುಟುಂಬಕ್ಕೆ ಆಶೀರ್ವಾದವೇ ಆಗಿದೆ ಎಂದು ಹೇಳಿದ್ದಾರೆ. “ಅಮೃತಸರದಲ್ಲಿ ನನ್ನ ಪತಿ ಬಟ್ಟೆ ಅಂಗಡಿ ನಡೆಸುತ್ತಾರೆ. ಕೋಟಿ ರೂಪಾಯಿಯ ಲಾಟರಿ ಹೊಡೆದಿರುವುದು ನಮ್ಮ ಕುಟುಂಬಕ್ಕೆ ದೊಡ್ಡ ಆರ್ಥಿಕ ಶಕ್ತಿ ನೀಡಿದೆಎಂದಿದ್ದಾರೆ.

ಫೆಬ್ರವರಿ 11 ರಂದು ಲಾಟರಿ ಫಲಿತಾಂಶ ಘೋಷಿಸಲಾಗಿದೆ ಎಂದು ಪಂಜಾಬ್ ರಾಜ್ಯ ಲಾಟರಿ ಇಲಾಖೆ ಅಧೀಕೃತ ವಕ್ತಾರರು ತಿಳಿಸಿದ್ದಾರೆ. ಶೀಘ್ರವೇ ರೇಣು ಅವರ ಖಾತೆಗೆ ಬಹುಮಾನದ ಹಣ ಹಾಕಲಾಗುವುದು ಎಂದು ಹೇಳಿದ್ದಾರೆ.

error: Content is protected !!