ಸಿನಿಮಾ ಪ್ರದರ್ಶನಕ್ಕೂ ಮುನ್ನ ಪುನೀತ್ ಸಾವಿಗೆ ಶ್ರದ್ದಾಂಜಲಿ ಸಲ್ಲಿಸದ ಬೆಳ್ಳಿ ಪರದೆ

ಬೆಳ್ಳಿ ಪರದೆಯಲ್ಲಿ ಮಿಂಚಿ ಮರೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಬೆಳ್ಳಿ ಪರದೆ ಸಂತಾಪ ಸೂಚಿಸದೆ ಸಿನಿಮಾಗಳನ್ನ ಪ್ರದರ್ಶನ ಮಾಡುತ್ತಿದ್ದು ಅಪ್ಪು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ನಿಧನರಾಗಿ ಇಂದಿಗೆ 5 ದಿನಗಳು ಕಳೆಯುತ್ತಾ ಬಂದಿದೆ. ತಮ್ಮ ಸರಳತೆಯಿಂದಲೇ ಜನರ ಮನಸ್ಸನ್ನ ಗೆದ್ದಿದ್ದ ಅವರ ಅಕಾಲ ನಿಧನಕ್ಕೆ ಇಡೀ ಕರ್ನಾಟಕದ ಕೋಟ್ಯಾಂತರ ಜನರು ಕಂಬನಿ ಮಿಡಿದರು. ದೇಶ ವಿದೇಶಗಳಿಂದ ಗಣ್ಯರು ವಿವಿಧ ರೀತಿಯಲ್ಲಿ ಸಂತಾಪ ಸೂಚಿಸಿದ್ರು. ಆದರೆ ಕನ್ನಡ ಬೆಳ್ಳಿ ಪರದೆಯಲ್ಲಿ ಸಿನಿಮಾಗಳ ಪ್ರದರ್ಶನದ ವೇಳೆ ಪುನಿತ್ ಸಾವಿಗೆ ಶ್ರದ್ದಾಂಜಲಿ ಸಲ್ಲಿಸದಿರುವುದಕ್ಕೆ ಅಪ್ಪು ಅಭಿಮಾನಿಗಳು ಹಾಗೂ ಸಿನಿ ಪ್ರೇಕ್ಷಕರು ಸಿನಿಮಾ ಡಿಸ್ಟ್ರಿಬ್ಯೂಟರ್ ಗಳ ವಿರುದ್ದ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಪುನೀತ್ ಸಾವಿನ ದಿನವೇ ಅಣ್ಣ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ತೆರೆಕಂಡಿತ್ತು, ಸಿನಿಮಾ ಬಗ್ಗೆ ಪುನೀತ್ ಡಿಸ್ಟ್ರಿಬ್ಯೂಟರ್ ಬಳಿ ಮಾಹಿತಿ ಪಡೆದಿದ್ದರು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಭಜರಂಗಿ 2 ಸಿನಿಮಾ ಪ್ರದರ್ಶನದ ವೇಳೆ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಬಹುದು, ಪುನೀತ್ ನಿಧನಕ್ಕೆ ಒಂದೆರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವಂತೆ ಪ್ರೇಕ್ಷಕರಲ್ಲಿ ಕೇಳಿಕೊಳ್ಳಬಹುದು ಪುನೀತ್ ಅವರ ಬಗ್ಗೆ ವಿಡಿಯೋ ತುಣುಕು ಪ್ರದರ್ಶಿಸಬಹದು ಎಂಬೆಲ್ಲಾ ಕಲ್ಪನೆಳಿಂದ ಥಿಯೇಟರ್ ಪ್ರವೇಶಿಸುವ ಪ್ರೇಕ್ಷಕನಿಗೆ ಆರಂಭದಲ್ಲೆ ಏಕತಾ ದೀವಸ್, ಗುಟ್ಕಾ, ಮದ್ಯಪಾನ, ಇನ್ನಿತರೆ ಜಾಹಿರಾತುಗಳನ್ನ ಪ್ರದರ್ಶನ ಗೊಳ್ಳುತ್ತವೆ. ಆದರೆ ಕನ್ನಡ ಸಿನಿಮಾ ರಂಗಕ್ಕೆ ತಮ್ಮ ಕುಟುಂಬವೇ ಹಗಲಿರುಳು ತಮ್ಮ ಜೀವನವನ್ನೆ ಮುಡುಪಾಗಿಟ್ಟು ಕನ್ನಡ ಚಿತ್ರೋಧ್ಯಮವನ್ನ ಉತ್ತುಂಗಕ್ಕೆ ಕೊಂಡೊಯ್ದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುವುದೇ ಇಲ್ಲಾ,

ಕನ್ನಡ ಚಲಚಿತ್ರದ್ಯೋಮ ಮಂಡಳಿ ಈ ಬಗ್ಗೆ ಗಮನ ಹರಿಸಿ ಕೂಡಲೆ ಬೆಳ್ಳಿ ಪರದೆ ಮೇಲೆ ಪುನಿತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಗೌರವಿಸುವಂತೆ ಸಿನಿಮಾ ವಿತರಕರಿಗೆ ಸೂಚನೆ ನೀಡಲಿ, ನಟ ಪುನಿತ್ ರಾಜ್ ಕುಮಾರ್ ಅವರಿಗೆ ಪ್ರತಿ ಸಿನಿಮಾ ಥಿಯೇಟರ್ ಗಳಲ್ಲೂ ಶ್ರದ್ದಾಂಜಲಿ ಸಲ್ಲಿಸುವಂತಾಗಲಿ

error: Content is protected !!