ತುಮಕೂರು ರಾ.ಹೆದ್ದಾರಿಯಲ್ಲಿ ಸರಣಿ ಅಪಘಾತ : ಟ್ರಾಫಿಕ್ ಜಾಮ್..!

ತುಮಕೂರು: ನೆಲಮಂಗಲ ಮತ್ತು ಟಿ ಬೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂ ಬೆಳ್ಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದ ಪರಿಸ್ಥಿತಿ ಕಂಡು ಬಂದಿತ್ತು.

ಸದ್ಯ ಚಳಿಗಾಲ ಇರುವ ಕಾರಣ ಬೆಳಗ್ಗೆಯಿಂದಲೂ ಮಂಜು ಕವಿದ ವಾತಾವರಣ ಇದ್ದ ಕಾರಣ ಈ ರೀತಿ ಸರಣಿ ಅಪಘಾತ ನಡೆದಿದೆ. ಆದ್ರೆ ಘಟನೆ ಸ್ಥಳದಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಇನ್ನು ಸಿಕ್ಕಿಲ್ಲ.

ಟೆಂಪೋ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಂದರ ಹಿಂದೊಂದರಂತೆ ಸರಣಿ ವಾಹನಗಳು ಡಿಕ್ಕಿ ಹೊಡೆದಿದೆ. ಸುಮಾರು ಮೂರು ಕಿ.ಮೀ ಗಟ್ಟಲೇ ವಾಹನ ದಟ್ಟಣೆ ಕಂಡು ಬಂದಿತ್ತು. ಸರಣಿ ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಟ ಪಡುವಂತಾಯಿತು.

error: Content is protected !!