ಬಸ್ ನಿಲ್ಲುವ ಮೊದಲೆ ಇಳಿಯುವ ಪ್ರಯತ್ನ ಮಾಡಬೇಡಿ: ತಿಪಟೂರಿನಲ್ಲಿ ಏನಾಯ್ತು ನೋಡಿ.

ತಿಪಟೂರು: ಕೆ ಎಸ್ ಆರ್ ಟಿ ಸಿ ಅಥವಾ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಬಾಗಿಲು ಬಳಿ ನಿಲ್ಲಬೇಡಿ, ಬಸ್ ನಿಲ್ಲುವ ಮುನ್ನಾ ಇಳಿಯಬೇಡಿ ಎಂದು ಹಲವಾರು ಭಾರಿ ನಿರ್ವಾಹಕರುಗಳು ಹೇಳುತ್ತಲೆ ಇರುತ್ತಾರೆ. ಆದರೂ ಕೆಲ ಪ್ರಯಾಣಿಕರು ಹಠಕ್ಕೆ ಬಿದ್ದವರಂತೆ ಆತುರಾತುರವಾಗಿ ಇಳಿಯುವ ಪ್ರಯತ್ನ ಮಾಡುತ್ತಾರೆ, ಬಸ್ ನಿಲ್ಲುವ ಮೊದಲೇ ಬಾಗಿಲ ಬಳಿ ಬಂದು ನಿಂತು ಅವರೇ ಸ್ವತಃ ಬಾಗಿಲು ತೆರೆಯುತ್ತಾರೆ.

ಈಗೆ ಬಸ್ ನಿಲ್ಲುವ ಮೊದಲೇ ಬಾಗಿಲ ಬಳಿ ಬಂದು ನಿಂತ ಪ್ರಯಾಣಿಕ ವ್ಯಕ್ತಿಯೊಬ್ಬರು ಸರ್ಕಲ್ ನ ತಿರುವಿನಲ್ಲಿ ಚಲಿಸುತ್ತಿದ್ದ ಬಸ್ ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಘಟನೆ ನಡೆದಿದೆ.

ಧರ್ಮಸ್ಥಳಕ್ಕೆ ತೆರಳುತ್ತಿದ್ದ ತುಮಕೂರು ಡಿಪೋಗೆ ಸೇರಿದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ವ್ಯಕ್ತಿಯೋರ್ವರು ತುಮಕೂರಿನಿಂದ ತಿಪಟೂರಿಗೆ ಬಂದಿದ್ದಾರೆ. ಬಸ್ ಕೋಡಿ ಸರ್ಕಲ್ ಗೆ ಬರುವಷ್ಟರಲ್ಲೆ ಲಗೇಜ್ ಸಮೇತ ಎದ್ದು ಬಾಗಿಲ ಬಳಿ ಬಂದು ನಿಂತ ಪ್ರಯಾಣಿಕನನ್ನ ನಿರ್ವಾಹಕ ಸರ್ಕಲ್ ನಲ್ಲಿ ಇಳಿಯುತ್ತಿರಾ ಎಂದು ಕೇಳಿದ್ದಾರೆ, ಆದರೆ ಪ್ರಯಾಣಿಕ ಇಲ್ಲಾ ಮುಂದೆ ಬಸ್ ಸ್ಟ್ಯಾಂಡ್ ನಲ್ಲಿ ಇಳಿಯುವುದಾಗಿ ಹೇಳಿ ಬಾಗಿಲಿನಲ್ಲೆ ನಿಂತು ಕೊಂಡಿದ್ದಾರೆ. ಬಸ್ ಕೆರೆ ಕೋಡಿ ಸರ್ಕಲ್ ನ ತಿರುವಿನಲ್ಲಿ ಚಲಿಸುವಾಗ ಬಾಗಿಲ ಬಳಿಯೇ ಲಗೇಜ್ ಸಮೇತ ನಿಂತಿದ್ದ ವ್ಯಕ್ತಿ ಆಯತಪ್ಪಿ ಬಾಗಿಲು ತಳ್ಳಿಕೊಂಡು ರಸ್ತೆಗೆ ಮಖಾಡೆ ಬಿದ್ದರು ಎಂದು ಸಹಪ್ರಯಾಣಿಕರು ತಿಳಿಸಿದ್ದಾರೆ.

ರಸ್ತೆಗೆ ಬಿದ್ದ ರಭಸಕ್ಕೆ ಪ್ರಯಾಣಿಕನ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಬಸ್ ನಿಲ್ಲಿಸಿದ ನಿರ್ವಾಹಕ ಹಾಗೂ ಚಾಲಕರು ಪ್ರಯಾಣಿಕರ ನೆರವಿನಿಂದ ವ್ಯಕ್ತಿಯನ್ನ ಬಸ್ ನಲ್ಲಿಯೇ ಕೂರಿಸಿಕೊಂಡು ನೇರವಾಗಿ ತಿಪಟೂರು ಸರ್ಕಾರಿ ಆಸ್ಪತ್ರೆ ಆವರಣಕ್ಕೆ ತೆರಳಿ ಗಾಯಗೊಂಡಿದ್ದ ಪ್ರಯಾಣಿಕ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇಲ್ಲಿ ಘಟನೆ ಬಗ್ಗೆ ಸರಿತಪ್ಪು ಲೆಕ್ಕ ಹಾಕುವುದಕ್ಕೂ ಮೊದಲು ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡಿಸುವ ದೃಷ್ಠಿಯಿಂದ ನಿರ್ವಾಹಕ ಹಾಗೂ ಚಾಲಕ ಮತ್ತು ಪ್ರಯಾಣಿಕರು ಗಾಯಾಳು ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!