ಕೋವಿಡ್ ಲಸಿಕೆ ಬೇಡವೆಂದು ಮರವೇರಿ ಕುಳಿತ ವ್ಯಕ್ತಿ; ವಿಡಿಯೋ ವೈರಲ್

ಚೆನ್ನೈ, ಡಿಸೆಂಬರ್ 29: ಕೋವಿಡ್ ಲಸಿಕೆ ಬೇಡವೆಂದು 40 ವರ್ಷದ ವ್ಯಕ್ತಿಯೊಬ್ಬರು ಮರ ಹತ್ತಿ ಕುಳಿತ ಘಟನೆ ಪುದುಚೇರಿಯ ವಿಲಿಯನೂರ್ ಬಳಿಯ ಕೊನ್ನೇರಿಕುಪ್ಪಂ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರೋಗ್ಯ ಕಾರ್ಯಕರ್ತರು ಕೋವಿಡ್ -19 ಲಸಿಕೆ ನೀಡಲು ಪುದುಚೇರಿಯ ವಿಲಿಯನೂರ್ ಬಳಿಯ ಕೊನ್ನೇರಿಕುಪ್ಪಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಈತ ವ್ಯಾಕ್ಸಿನ್ ಎಗೆದುಕೊಂಡಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಆತನ ಮನೆಗೆ ಹೋದರು. ಆದರೆ ಆತ ವ್ಯಾಕ್ಸಿನ್ ಬೇಡವೆಂದು ಹಠ ಹಿಡಿದು ಮರದ ಮೇಲೆ ಹತ್ತಿದವರು ಕೆಳಗೆ ಇಳಿಯಲಿಲ್ಲ.

ಆರೋಗ್ಯ ಕಾರ್ಯಕರ್ತರು ಮತ್ತು ನೆರೆಹೊರೆಯವರು ಅವರನ್ನು ಕೆಳಗಿಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಕೋವಿಡ್ ಬಾರಬರದೆಂದರೆ ಕೋವಿಡ್ ಲಸಿಕೆ ಹಾಕುವುದು ಅವಶ್ಯಕ ಮತ್ತು ಈಗಾಗಲೇ ಗ್ರಾಮದಲ್ಲಿ ಅನೇಕರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರೂ ಆ ವ್ಯಕ್ತಿ ಬಗ್ಗಲಿಲ್ಲ ಮತ್ತು ಆರೋಗ್ಯ ಕಾರ್ಯಕರ್ತರನ್ನೇ ನಿಂದಿಸಿ ಲಸಿಕೆ ನೀಡುವುದಾದರೆ ಮರವನ್ನು ಹತ್ತಿ ಲಸಿಕೆ ನೀಡುವಂತೆ ಹೇಳಿದನು. ತದ ನಂತರ ಆತನಿಗೆ ಲಸಿಕೆ ನೀಡಲು ಸಾಧ್ಯವಾಗದೆ ಆರೋಗ್ಯ ಕಾರ್ಯಕರ್ತರು ವಾಪಸ್ಸು ಹೋದರು.

error: Content is protected !!