ತುಮಕೂರು: ಕಾಮಿಡಿ ಸ್ಟಾರ್ ರಘು ನಟಿಸಿರುವ ಕೆಎಸ್‌ಎಸ್ ಪ್ರೊಡಕ್ಷನ್ ನಿರ್ಮಾಣದ 3 ನೇ ಚಿತ್ರ “ಗುಳ್ಳೆನರಿ” ಸಿನಿಮಾ 2025ಕ್ಕೆ ಬೆಳ್ಳಿ ತೆರೆಗೆ ಬರಲು ಸಿದ್ದವಾಗಿದೆ.
ಕೆಲಸವಿಲ್ಲದೆ ಪಟ್ಟಣ ಸೇರಿದ ಹಳ್ಳಿ ಹುಡುಗನೊಬ್ಬ ಮತ್ತೆ ತಾಯಿ ಪ್ರೀತಿ ಗಾಗಿ ಹಳ್ಳಿಗೆ ವಾಪಸ್ ಬರುತ್ತಾನೆ. ಹಳ್ಳಿಯಲ್ಲಿನ ಜಾತಿ ತಾರತಮ್ಯದ ವಿರುದ್ದ ಹೋರಾಟ ಮಾಡುತ್ತಾನೆ. ಊರ ಗೌಡನ ವಿರುದ್ದ ನಿಂತು ಚುನಾವಣೆಯಲ್ಲಿ ಗೆಲ್ಲುತ್ತಾನೆ. ಇಂದೊಂದು ಕಾಮಿಡಿ ಆಧಾರಿತ ಸಿನಿಮಾ ಆದರೂ ಅಲ್ಲಿ ಮಾಸ್ ಸೀನ್ ಗಳಿದೆಯಂತೆ, ಕಾಮಿಡಿ ಸ್ಟಾರ್ ರಘು ಪ್ರೇಕ್ಷಕರನ್ನ ನಗೆ ಗಡಲಲ್ಲಿ ತೇಲುವಂತೆ ಮಾಡಿದ್ದಾರೆ.
ಕೆಎಸ್‌ಎಸ್ ಪ್ರೊಡಕ್ಷನ್ ನಿರ್ಮಾಣದ 3 ನೇ ಚಿತ್ರ ಗುಳ್ಳೆನರಿ, ಬಿಗ್ ಬಾಸ್ ಖ್ಯಾತಿಯ ಧರ್ಮಾ ಕೀರ್ತಿ ರಾಜ್ ನಟನೆಯ “ಮುಮ್ತಾಜ್” ಹಾಗೂ “ತಲ್ವಾರ್” ಸಿನಿಮಾಗಳನ್ನ ನಿರ್ಮಾಣ ಮಾಡಿ ಯಶಸ್ಸು ಕಂಡಿರುವ ನಿರ್ಮಾಪಕ ಕುಮಾರ್ ನಾಯ್ಕ್ “ಗುಳ್ಳೆನರಿ” ಚಿತ್ರಕ್ಕೂ ಹಣ ಹೂಡಿದ್ದಾರೆ. ಬಡತನದಿಂದಲೇ ಬೆಳೆದು ಬಂದಿರುವ ನಿರ್ಮಾಪಕ ಕುಮಾರ್ ನಾಯ್ಕ್ ಬಡವರ ಮಕ್ಕಳನ್ನ ಬೆಳ್ಳಿ ಪರದೆಗೆ ಪರಿಚಯಿಸುವ ಉದ್ದೇಶದಿಂದ ಈ ಚಿತ್ರದಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಈ ಚಿತ್ರಕ್ಕೆ ಪರಿಸರಪ್ರೇಮಿ ಶ್ರೀ ರಜಿನಿ.ಎನ್ ಆ್ಯಕ್ಷನ್ ಕಟ್ ಹೇಳಿದ್ದಾರೆ, ಸಿನಿಮಾ ಬಗ್ಗೆ ಅತೀವ ಆಸಕ್ತಿ ಹೊಂದಿರುವ ರಜಿನಿ ಅವರು ಇದುವರೆಗೂ ಮೂರು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. “ನವ ಇತಿಹಾಸ” ಮತ್ತು “ರುದ್ರಕಣಿವೆ” ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಇದೀಗ ಗುಳ್ಳೆನರಿ ಚಿತ್ರಕ್ಕೆ ಚಿತ್ರಕತೆ ಸಂಭಾಷಣೆ ಸಾಹಿತ್ಯದ ಜೊತೆ ಚಿತ್ರದ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.
ರಂಗಭೂಮಿಯಿಂದ ಬಂದು ಕಲಾವಿದನಾಗಿ ಜನರ ರಂಜಿಸಿ ಮನಗೆದಿದ್ದ ಕಾಮಿಡಿ ಸ್ಟಾರ್ ರಘು “ಗುಳ್ಳೆನರಿ” ಚಿತ್ರದ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಮೊದಲು “ಲೇರ್ಯ” ಮತ್ತು “ನವ ಇತಿಹಾಸ” ಸಿನಿಮಾಗಳಿಗೆ ಬಣ್ಣ ಹಚ್ಚಿದ್ದ ಕಾಮಿಡಿ ಸ್ಟಾರ್ ರಘು, ಹಾಸ್ಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.ಬದಲಾಗು ನೀ ಮನವೆ” ಎಂಬ ಶಾರ್ಟ್ ಮೂವಿ ನಿರ್ದೇಶಿಸಿ ನಟನೆ ಮಾಡಿದ್ದರು. ಇದೀಗ “ಗುಳ್ಳೆನರಿ” ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.
ಕಾಮಿಡಿ ಸ್ಟಾರ್ ರಘು ಕಥೆ ಬರೆದಿದ್ದು ನಿರ್ದೆಶಕ ಶ್ರೀ ರಜಿನಿ ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಬರೆದಿದ್ದಾರೆ.ವಿನು ಮನಸ್ಸು ಸಂಗೀತ ನೀಡಿದ್ದಾರೆ. ಕುಂಪು ಚಂದ್ರು ಸಾಹಸ, ಸಂದೀಪ್ ಹೊನ್ನಳ್ಳಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ “ಗುಳ್ಳೆನರಿ”ಯನ್ನ ಸುನೈನ್ ಜೈನ್ ಸಂಕಲನ ಮಾಡಿದ್ದಾರೆ.
ನಾಯಕ ನಟಿಯಾಗಿ ಉತ್ತರ ಕರ್ನಾಟಕದ ಬೆಡಗಿ ಮದುಶ್ರೀ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಧರ್ಮಾ ಕೀರ್ತಿರಾಜ್ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ತುಕಾಲಿ ಸಂತೋಷ್ ನಟಿಸಿದ್ದಾರೆ. ಬಾಲರಾಜುವಾಡಿ, ಯತೀರಾಜ್, ಅಪೂರ್ವ, ಶಂಕನಾದ ಆಂಜಿನಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಕುಟುಂಬ ಸಮೇತರಾಗಿ ನೋಡುವಂತಹ ಒಂದು ಫ್ಯಾಮಿಲಿ ಎಂಟರ್‌ಟೈನ್ ಮೆಂಟ್ ಸಿನಿಮಾ ಇದಾಗಿದ್ದು 2025 ರ ಹೊಸ ವರ್ಷಕ್ಕೆ ಗುಳ್ಳೆನರಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಜನವರಿ ತಿಂಗಳಲ್ಲಿ “ಗುಳ್ಳೆನರಿ”ಯನ್ನ ಬೆಳ್ಳಿ ಪರದೆಗೆ ತರಲು ಚಿತ್ರ ತಂಡ ತಯಾರಿ ನಡೆಸಿದೆ.