ಜರ್ನಲಿಸಂ,ಫೋಟೊಗ್ರಾಫಿ ತರಬೇತಿ ಪಡೆಯಲು ಪ.ಜಾ ಯುವಕ/ಯುವತಿಯರಿಗೆ ಸುವರ್ಣಾವಕಾಶ.

ತುಮಕೂರು: ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು 2020-21 ನೇ ಸಾಲಿಗೆ ವಿಡಿಯೋ ಜರ್ನಲಿಸಂ ಮತ್ತು ಫೋಟೋಗ್ರಾಫಿ, ವರದಿಗಾರಿಕೆ ಮತ್ತು ನಿರೂಪಣಾ ತರಬೇತಿ ನೀಡಲು ಪರಿಶಿಷ್ಟ ಜಾತಿಯ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 45 ವರ್ಷ ವಯಸ್ಸಿನವರಾಗಿದ್ದುಆಧುನಿಕ ತರಬೇತಿ ಪಡೆಯಲು ಆಸಕ್ತರಾಗಿರಬೇಕು. ಪದವಿ ವಿದ್ಯಾರ್ಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದುಅರ್ಜಿಯನ್ನು  ಮಾರ್ಚ್ 20 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2200069 ಅಥವಾ ಆಯಾ ತಾಲೂಕಿನ ನಿಗಮದ ಅಭಿವೃದ್ಧಿ ಅಧಿಕಾರಿಗಳನ್ನು ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಶ್ರೀ ನಾಗಾರ್ಜುನ ಪತ್ತಿನ ಸಹಕಾರ ಸಂಘ ಬಿಲ್ಡಿಂಗ್, ಸದಾಶಿವನಗರ, ಕುಣಿಗಲ್ ರಸ್ತೆ, ತುಮಕೂರು– 572105ಅನ್ನು ಸಂಪರ್ಕಿಸಬಹುದಾಗಿದೆ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!