ಗುಬ್ಬಿ. ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಸೌಹಾರ್ದ ಸಭೆ ದಲಿತರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ.ತಹಶೀಲ್ದಾರ್ ಆರತಿ ಬಿ.

ಗುಬ್ಬಿ ತಾಲ್ಲೂಕಿನ ದಾಸರಕಲ್ಲಹಳ್ಳಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ದಲಿತ ಸಮುದಾಯದ ವರಿಗೆ ಸವರ್ಣೀಯರು ಪ್ರವೇಶ ನೀಡುತ್ತಿಲ್ಲ ಎಂದು ಗ್ರಾಮದ ದಲಿತರು ಮತ್ತು ಮುಖಂಡರು ಗುಬ್ಬಿ ತಹಶೀಲ್ದಾರ್ ಕಛೇರಿ ಗೆ ಭೇಟಿ ನೀಡಿ ಮನವಿ ಸಲ್ಲಿಸಿದರು. ಸ್ಥಳೀಯ ರ ಮನವಿ ಮೇರೆಗೆ ತಹಶೀಲ್ದಾರ್ ಆರತಿ.ಬಿ ಮತ್ತು ಕಡಬ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಯವರು ದಾಸರಕಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರು ಮತ್ತು ದಲಿತ ಮುಖಂಡರೊಂದಿಗೆ ಸೌಹಾರ್ದ ಸಭೆ ನೆಡೆಸಿ ಮುಜರಾಯಿ ಇಲಾಖೆ ಎಲ್ಲಾ ದೇವಾಲಯಗಳಿಗೆ ಎಲ್ಲಾ ಸಮುದಾಯದವರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದು ಯಾರು ಸಹ ದೇವಾಲಯಗಳಿಗೆ ಬರುವ ಸಾರ್ವಜನಿಕರಿಗೆ ಪ್ರವೇಶ ನೀರಾಕರಿಸುವಂತಿಲ್ಲ .ಸರ್ಕಾರ ದ ನಿಯಮಗಳನ್ನು ಗ್ರಾಮಸ್ಥರು ಪಾಲಿಸುವ ಮೂಲಕ ಎಲ್ಲಾ ಸಮುದಾಯದ ಮುಖಂಡರು ಶಾಂತಿ ಸೌಹಾರ್ದತೆ ಕಾಪಾಡುವ ಮೂಲಕ ಉತ್ತಮ ವಾತಾವರಣ ನಿರ್ಮಾಣಕ್ಕೆ ಗ್ರಾಮಸ್ಥರ ಹೆಚ್ಚಿನ ಸಹಕಾರ ನೀಡಬೇಕು ಎಂದು ಗ್ರಾಮಸ್ಥರಿಗೆ ತಿಳಿಹೇಳಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಸಮುಖದಲ್ಲಿ ದೇವಾಲಯ ಕ್ಕೆ ಗ್ರಾಮಸ್ಥರ ಉಪಸ್ಥಿತಿಯಲ್ಲಿ ದಲಿತ ಸಮುದಾಯದ ವರನ್ನು ದೇವಾಲಯಕ್ಕೆ ಸಾಮೂಹಿಕವಾಗಿ ಪ್ರವೇಶ ಕಲ್ಪಿಸಲಾಯಿತು ತಾಲೂಕು ಆಡಳಿತದ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಡಬ ನಾಡ ಕಛೇರಿಯ ಉಪತಹಶೀಲ್ದಾರ್ ರಾಜೇಂದ್ರ ಕುಮಾರ್. ಕಂದಾಯ ನಿರೀಕ್ಷಕ ನಾಗಭೂಷಣ್. ಕಡಬ ಠಾಣೆ ಠಾಣಾಧಿಕಾರಿ ಚಂದ್ರಶೇಖರ್. ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!