ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ, ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಸಾವು.

ಆನೇಕಲ್: ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬನ್ನೇರುಘಟ್ಟ ಸಮೀಪದ ಕೆಂಪನಾಯಕನಹಳ್ಳಿ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಈ ದುರ್ಘಟನೆ ನಡೆದಿದ್ದು, ಎಎಂಸಿ ಕಾಲೇಜಿನ ಬಿ ಎಂ ಎಚ್ ವಿದ್ಯಾರ್ಥಿ ಕೌಶಿಕ್ ಹಾಗು ಸುಷ್ಮಾ ಮೃತ ದುರ್ದೈವಿಗಳಾಗಿದ್ದಾರೆ.

ಮೃತರಿಬ್ಬರು ಬೆಂಗಳೂರಿನ ಸಾರಕ್ಕಿ‌ ನಿವಾಸಿಗಳಾಗಿದ್ದು, ಬನ್ನೇರುಘಟ್ಟದ ಎಎಂಸಿ ಕಾಲೇಜಿಗೆ ಬಂದು ಹೋಗುತ್ತಿದ್ದರು. ನಿನ್ನೇ ಸಂಜೆಯು ಅದೇ ರೀತಿ ಕಾಲೇಜು ಮುಗಿದ ಬಳಿಕ ಬನ್ನೇರುಘಟ್ಟ ಮಾರ್ಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಂಟೈನರ್ ಡಿಕ್ಕಿಯಾಗಿದೆ.ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ರು ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತ ನಂತರ ಕಂಟೈನರ್ ಚಾಲಕ ಪರಾರಿಯಾಗಿದ್ದು, ಘಟನೆ ಸಂಬಂಧ ಬನ್ನೇರುಘಟ್ಟ ಪೋಲಿಸರು ದೂರು ದಾಖಲು ಮಾಡಿಕೊಂಡಿದ್ದಾರೆ.

error: Content is protected !!