ಕೊರಟಗೆರೆ: ಪಟ್ಟಣ ಪಂಚಾಯತಿಯ ಮುಂಭಾಗದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ತ್ರಿವಿಧ ದಾಸೋಹಿಗಳು ಬಡ ಮಕ್ಕಳ ಆರಾಧ್ಯ ದೈವ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರನೇ ವರ್ಷದ ಪುಣ್ಯ ಸ್ಮರಣೆಯನ್ನ ಅವರ ಭಾವಚಿತ್ರಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಪೂಜೆ ಬಳಿಕ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾದ ವೀರಭದ್ರಯ್ಯ ಮಾತನಾಡಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಪಾರ ಕೊಡುಗೆ ನಮ್ಮ ನಾಡಿಗಿದೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ನಮ್ಮ ಮುಂದಿನ ಪೀಳಿಗೆ ಅವರ ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಬಡವರಿಗೆ ದೀನ ದಲಿತರಿಗೆ ಸಹಾಯ ಮಾಡುವ ಮನಸ್ಸು ಎಲ್ಲರಲ್ಲೂ ಬರಬೇಕು ಅವರಂತೆ ನಾಡಿಗೆ ಹೆಸರು ತರುವ ಕೆಲಸ ನಮ್ಮ ಮಕ್ಕಳು ಮಾಡಬೇಕು ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಖಜಾಂಚಿ ಜಿಎಂ ಶಿವಾನಂದ ಮಾತನಾಡಿ ಶ್ರೀಗಳ ಗುರಿಯೇ ದಾಸೋಹ ವ್ಯವಸ್ಥೆ ಮಾಡುವುದು ಅವರ ಕನಸಿನಂತೆ ಎಲ್ಲರಿಗೂ ದಾಸೋಹ ಲಭಿಸಲಿ ಯಾರು ಹಸಿವಿನಿಂದ ಬಳಲದಂತೆ ಶ್ರೀಗಳ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ತಿಳಿಸಿದರು.

ಪೂಜೆ ಬಳಿಕ ತ್ರಿವಿಧ ದಾಸೋಹದ ರೀತಿಯಲ್ಲಿ ತಯಾರಿಸಿದ್ದ ವಿಶೇಷ ದಾಸೋಹ ಪ್ರಸಾದವನ್ನು ಭಕ್ತಾದಿಗಳಿಗೆ ನೀಡಲಾಯಿತು..

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷರಾದ ವಿನಯ್ ಕುಮಾರ್,ಖಜಾಂಚಿ ಜಿ.ಎಂ ಶಿವಾನಂದ್, ಸಹ ಕಾರ್ಯದರ್ಶಿ ಶ್ರೀ ಪವನ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ಆರಾಧ್ಯ, ಮಹಿಳಾ ಘಟಕದ ಅಧ್ಯಕ್ಷರಾದ ದಾಕ್ಷಾಯಿಣಿ, ಈಶ ಪ್ರಸಾದ್, ಮಂಜುಳಾ, ರೂಪ ಶ್ರೀ, ಶುಭ, ಮಲ್ಲಣ್ಣ, ಕಿರಣಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಭಕ್ತಾದಿಗಳು ಹಾಜರಿದ್ದರು…

LEAVE A REPLY

Please enter your comment!
Please enter your name here