ತುಮಕೂರು:ಶ್ರೀ ಅಟವಿ ಮಠದ ಮುಂದಿನ ಉತ್ತರಾಧಿಕಾರಿಗೆ ಗಳಾಗಿ ಶ್ರೀ ಅಟವಿ ಮಲ್ಲಿಕಾರ್ಜುನದೇವರ ನಿರಂಜನ ನಿರಾಭಾರಿ ಚರಪಟ್ಟಾಧಿಕಾರ ಮಹೋತ್ಸವ ತುಮಕೂರಿನ ಚಿಕ್ಕತೋಟ್ಲುಕರೆಯಲ್ಲಿರುವ ಶ್ರೀ ಅಟವಿ ಜಂಗಮ ಕ್ಷೇತ್ರದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. ಶ್ರೀ ಅಟವಿ ಮಹಾಸ್ವಾಮಿಗಳ 124 ನೇ ಪುಣ್ಯ ಸ್ಮರೋಣೋತ್ಸವ ಹಾಗೂ ಮಠಾಧ್ಯಕ್ಷರಾದ ಶ್ರೀ ಅಟವಿ ಶಿವಲಿಂಗ ಮಹಾಸ್ವಾಮಿಗಳ ರಜತ ಮಹೋತ್ಸವ ದಿನದಂದು ವಿವಿಧ ಮಠಾಧೀಶರು, ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರಿ ಅಟವಿ ಶಿವಲಿಂಗ ಮಹಾಸ್ವಾಮಿಗಳು ಪೋಷಕರು ತಮ್ಮ ಮಗುವನ್ನ ಮಠಕ್ಕೆ ಧಾರೆ ಎರೆದು ಕೊಡುತ್ತಾರೆ, ನಾವು ಸಮಾಜಕ್ಕೆ ದಾರೆ ಎರೆದು ಕೊಡುತ್ತೇವೆ. ಪೂರ್ವಾಶ್ರಮದ ಬಂಧನದಿಂದ ಮುಕ್ತನಾಗಿ, ಜಗತ್ತೇ ನನ್ನ ಮನೆ ಮಾನವ ಕುಲವೇ ನನ್ನ ಕುಟುಂಬ ವಿಶ್ವ ಕೌಟುಂಬಿಕದ ಸಂಸ್ಕಾರ ನೀಡುವುದಕ್ಕಾಗಿ, ಮಂಡೆ ಬೋಳಿಸಿ ನಿರಾಕಾರವಾಗಿ ಧರ್ಮಸಂಸ್ಕಾರ ನೀಡುತ್ತಾ, ದೇಶಿಕರು, ದೇವರು ಮಹಾಸ್ವಾಮಿಗಳಾಗಿ ನಮ್ಮ ನಗರದ ಹಿರಿಯರು ಜನರ ಸಮ್ಮುಖದಲ್ಲಿ ತಂದೆ ತಾಯಿಗಳು ಆದರ್ಶವಾಗಿ ತಮ್ಮ ಕರುಳನ್ನ ನಮ್ಮ ಮಠಕ್ಕೆ ನೀಡಿದ್ದಾರೆ, ಜನರು ತುಂಭಾ ಭಾವುಕರಾಗಿ ಅದನ್ನ ಸ್ವೀಕರಿಸಿದ್ದಾರೆ. ಅಟವಿ ಜಂಗಮ ಕ್ಷೇತ್ರ ಅವಿಭಕ್ತ ಕ್ಷೇತ್ರ ಸಾಕ್ಷಾತ್ ಭ್ರಹ್ಮ ಸ್ವರೂಪ ಕ್ಷೇತ್ರವಾಗಿದೆ ಈ ಕ್ಷೇತ್ರದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸುವಂತೆ ಶ್ರಿ ಅಟವಿ ಶಿವಲಿಂಗ ಮಹಾಸ್ವಾಮಿಗಳು ಕರೆನೀಡಿದರು.