ತುಮಕೂರು: ಅಮೆರಿಕದ ಸ್ಟ್ಯಾನ್‍ ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯನಾಲ್ವರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ನಾಗಭೂಷಣ, ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಗಿರೀಶ್ ಕೆ. ಎಸ್.,ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ. ಚಂದ್ರಾಲಿ ಬೈಶ್ಯ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್‍ ಡಿ.ಈ ಹಿರಿಮೆಗೆ ಪಾತ್ರರಾಗಿದ್ದಾರೆ.

ಅಂತರಾಷ್ಟ್ರೀಯವಾಗಿ ಪ್ರಕಟವಾದ ಸ್ಕೋಪಸ್-ಸೂಚ್ಯಂಕ ಹೊಂದಿರುವ ಸಂಶೋಧನ ಪ್ರಕಟಣೆಗಳು, ಉಲ್ಲೇಖಗಳು, ಸಹ-ಲೇಖಕ ಸಂಶೋಧನ ಪ್ರಕಟಣೆಗಳು ಮತ್ತುಎಚ್-ಇಂಡೆಕ್ಸ್‍ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ.2 ಅಗ್ರವಿಜ್ಞಾನಿಗಳ ಪಟ್ಟಿಯನ್ನು ಸ್ಟ್ಯಾನ್‍ ಫೋರ್ಡ್ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತುಮಕೂರು ವಿವಿಯ ನಾಲ್ವರು ಪ್ರಾಧ್ಯಾಪಕರು ಸೇರಿರುವುದು ವಿಶೇಷವಾಗಿದೆ

ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಲಾದ ಸ್ಟ್ಯಾನ್‍ ಫೋರ್ಡ್ ವಿಶ್ವವಿದ್ಯಾನಿಲಯದ ಪಟ್ಟಿಯು ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪಕ್ಷೇತ್ರಗಳಾಗಿ ವರ್ಗೀಕರಿಸುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರುತಮ್ಮ ಸಂಶೋಧನ ಸಾಧನೆಗಳ ಆಧಾರದಲ್ಲಿಇದರಲ್ಲಿ ಗುರುತಿಸಿಕೊಳ್ಳುತ್ತಾರೆ. ಪ್ರಾಧ್ಯಾಪಕರ ಈ ಸಾಧನೆಗೆ ತುಮಕೂರು ವಿವಿ ಕುಲಪತಿ ಫ್ರೋ.ಎಂ.ವೆಂಕಟೇಶ್ವರಲು ಹಾಗೂ ಕುಲ ಸಚಿವೆ ನಾಹಿದಾ ಜಂಜಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here