ತುಮಕೂರು: ರೈತನ ಹೊಲದಲ್ಲಿ ಕಂಡು ಬಂದ ಎಂಟು ಅಡಿ‌ ಉದ್ದದ ಹೆಬ್ಬಾವನ್ನ ಉರಗ ಸಂರಕ್ಷಣಾ ಸಂಸ್ಥೆ (ವಾರ್ಕೋ) ರಕ್ಷಣೆ ಮಾಡಿದೆ.

ತುಮಕೂರಿನ ಕೋರ ಹೋಬಳಿ ಚಿಕ್ಕತೋಟ್ಲುಕೆರೆಯ ಸಂಜಯ್ ‌ರವರು ಬೆಳಿಗ್ಗೆ ಹಸುವಿಗೆ ಮೇವು ತರಲು ಜಮೀನಿಗೆ ಹೋಗಿದ್ದಾಗ ಜೋಳದ ಬೆಳೆಯ ಮಧ್ಯದಲ್ಲಿ ಹೆಬ್ಬಾವು ನೋಡಿದ್ದಾರೆ.

ಕೊಡಲೇ ಅದೇ ಗ್ರಾಮದಲ್ಲಿ ವಾಸವಿರುವ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ರುದ್ರೇಶ್ ತೋಟ್ಲುಕೆರೆ ಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಆಗಮಿಸಿದ ರುದ್ರೇಶ್ ಮತ್ತು ಜಸ್ವಂತ್ ಸುಮಾರು 8 ಅಡಿ ಉದ್ದದ ಹೆಬ್ಬಾವುನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯಾಧಿಕಾರಿ ಸೂಚನೆಯಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ನಿಮ್ಮ ಸುತ್ತ ಮುತ್ತ ಹಾವುಗಳು ಕಂಡು ಬಂದಲ್ಲಿ ಅವುಗಳನ್ನ ಕೊಲ್ಲದೆ, ಕೂಡಲೇ  ಉರಗ ರಕ್ಷಕ ರುದ್ರೇಶ್ ಅವರಿಗೆ 9353606818 ಕರೆಮಾಡಿ ಕೂಡಲೇ ಸ್ಥಳಕ್ಕೆ ಬಂದು ರಕ್ಷಣೆ ಮಾಡಿ ಅರಣ್ಯಕ್ಕೆ ಕೊಂಡೊಯ್ದು ಬಿಡುತ್ತಾರೆ.

LEAVE A REPLY

Please enter your comment!
Please enter your name here