ಇದೇನು ಬೌಲಿಂಗ್ ಸ್ವಾಮಿ | 4 ಓವರ್‌ಗಳಲ್ಲಿ 70 ರನ್ !

ಸಿಡ್ನಿ, ಡಿ 28– ಬಿಗ್ ಬಾಷ್ ಲೀಗ್-2021 ರಲ್ಲಿ ಬ್ರಿಸ್ಬೇನ್ ಹೀಟ್‌ ತಂಡದ ಬೌಲರ್ ಲಿಯಾಮ್ ಗುತ್ರೀ ಅತ್ಯಂತ ಕೆಟ್ಟ ದಾಖಲೆ ಹೊತ್ತುಕೊಂಡಿದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ , ಬ್ರಿಸ್ಬೇನ್ ಹೀಟ್‌ ನಡುವಿನ ಪಂದ್ಯದಲ್ಲಿ 4 ಓವರ್‌ಗಳ ಕೋಟಾದಲ್ಲಿ ಗುತ್ರೀ ಒಟ್ಟು 70 ರನ್ ಸಮರ್ಪಿಸಿದ್ದಾರೆ. ಈ ಮೂಲಕ ಬಿಗ್ ಬಾಷ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ನೀಡಿದ ಬೌಲರ್ ಎಂಬ ಕೆಟ್ಟ ದಾಖಲೆ ಸೃಷ್ಟಿಸಿದ್ದಾರೆ. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಗುತ್ರೀ 70 ರನ್ ನೀಡಿ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಸಿಡ್ನಿ ಸಿಕ್ಸರ್ಸ್ ಬೌಲರ್ ಬೆನ್ ಡ್ವಾರ್ಜುಯಿಸ್ 61 ರನ್ ನೀಡಿದ್ದರು. ಇನ್ನು ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮೆಲ್ಬೋರ್ನ್ ಸ್ಟಾರ್ಸ್ ತಂಡ ಮೊದಲ ಓವರ್ ನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ನಾಯಕ ಮ್ಯಾಕ್ಸ್ ವೆಲ್ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು.

ಆದರೆ, ಓಪನರ್ ಕ್ಲಾರ್ಕ್, ಕಾರ್ಟ್‌ರೈಟ್ ಸ್ಕೋರ್‌ ಬೋರ್ಡ್ ಭರ್ಜರಿ ರನ್‌ ಗಳಿಶಿದರು ಕ್ಲಾರ್ಕ್ 44 ಎಸೆತಗಳಲ್ಲಿ 85 ರನ್ ಗಳಿಸಿದರೆ ಕಾರ್ಟ್ ರೈಟ್ 44 ಎಸೆತಗಳಲ್ಲಿ 79 ರನ್ ಗಳಿಸಿದರು. ಮೆಲ್ಬೋರ್ನ್ ಸ್ಟಾರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಬ್ರಿಸ್ಬೇನ್ ಹೀಟ್ ಬೌಲರ್‌ಗಳ ಪೈಕಿ ಸ್ಟೀಕ್ಟಿ ಮೂರು ವಿಕೆಟ್ ಪಡೆದರೆ, ಗುತ್ರೀ , ಬ್ಲೇಜಿ ಚೆರೋ ತಲಾ ಎರಡು ವಿಕೆಟ್ ಪಡೆದರು. ಇನ್ನೂ 208 ರನ್‌ಗಳ ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಬ್ರಿಸ್ಬೇನ್ ಹೀಟ್ ಬ್ಯಾಟ್ಸ್‌ಮನ್‌ ಗಳಾದ ಕ್ರಿಸ್ ಲಿನ್ (57) ಬೆನ್ ಡಕೆಟ್ (54) ಹೊರತುಪಡಿಸಿ ಉಳಿದವರು ಮಿಂಚಲಿಲ್ಲ. ಇದರಿಂದ ಬ್ರಿಸ್ಬೇನ್ ಹೀಟ್ ತಂಡ ನಿಗದಿತ 20 ಓವರ್ ಗಳಲ್ಲಿ 187 ರನ್ ಗಳಿಗೆ ಆಲೌಟ್ ಆಗಿ 20 ರನ್‌ಗಳಿಂದ ಸೋತಿತು. ಮೆಲ್ಬೋರ್ನ್ ಬೌಲರ್‌ಗಳಲ್ಲಿ ಬ್ರಾಡಿ ಕೌಚ್ ಕೈಸ್ ಅಹ್ಮದ್ ಚೆರೋ ತಲಾ ಮೂರು ವಿಕೆಟ್ ಪಡೆದರು.

error: Content is protected !!