ಈಜಿಪ್ಟ್ ನಗರಗಳಲ್ಲಿ 5.7 ತೀವ್ರತೆಯ ಭೂಕಂಪ

ಅಥೆನ್ಸ್, ಡಿಸೆಂಬರ್ 29: ಗ್ರೀಸ್‍ನ ಕ್ರೀಟ್‍ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವು, ಹಾನಿ ವರದಿಯಾಗಿಲ್ಲ.

ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ 6.1 ತೀವ್ರತೆಯ ಕಂಪನವನ್ನು ದಾಖಲಿಸಿದೆ. ದೇಶದ ಕೆಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಈಜಿಪ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೀಟ್‍ನಲ್ಲಿರುವ ಜಿಯೋಡೈನಾಮಿಕ್ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕ ಅಕಿಸ್ ಟ್ಸೆಲೆಂಟಿಸ್, ಅಧಿಕಾರಿಗಳು 5.6 ರಿಂದ 5.7 ತೀವ್ರತೆಯ ಅನುಭವವಾಗಿದೆ ಎಂದು ತಿಳಿಸಿದರು.

“ಅದೃಷ್ಟವಶಾತ್ ಅದು ಸಮುದ್ರದಲ್ಲಿ ಸಂಭವಿಸಿದೆ. ಒಳನಾಡಿನಲ್ಲಿ ಉಂಟಾಗಿದ್ದರೆ ಹಾನಿಯಾಗುತ್ತಿತ್ತು. ಭೂಕಂಪವು 80 ಕಿಮೀ (49.7 ಮೈಲುಗಳು) ಆಳದಲ್ಲಿದೆ ಎಂದು ಇಎಂಎಸ್‍ಸಿ ತಿಳಿಸಿದೆ. 42.7 ಕಿ.ಮೀ ಆಳದಲ್ಲಿ ಉಂಟಾಗಿದೆ ಎಂದು ಗ್ರೀಕ್ ಜಿಯೋಡೈನಾಮಿಕ್ ಸಂಸ್ಥೆ ತಿಳಿಸಿದೆ.

error: Content is protected !!