ಚಿನ್ನದ ಗಣಿಯಲ್ಲಿ 38 ಮಂದಿ ದಾರುಣ ಮರಣ

ಸೂಡಾನ್ : ಡಿಸೆಂಬರ್ 29:ಆಫ್ರಿಕಾದ ಸೂಡಾನ್ ನಲ್ಲಿ 38 ಮಂದಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಸೂಡಾನ್ ರಾಜಧಾನಿ ಕಾರ್ಟೋಮ್ ನಿಂದ ಸುಮಾರು 700 ಕಿ.ಮೀ ದೂರದಲ್ಲಿರುವ ಚಿನ್ನದ ಗಣಿಯಲ್ಲಿ ಚಿನ್ನದ ಹುಡುಕಾಟಕ್ಕೆ ಹೊರಟಿದ್ದ 38 ಮಂದಿ ದಾರುಣ ಸಾವಿಗೀಡಾಗಿರುವುದು ವರದಿಯಾಗಿದೆ.

ಸರ್ಕಾರ ಈ ಹಿಂದೆಯೇ ಈ ಗಣಿಯನ್ನ ಮುಚ್ಚಲು ಆದೇಶಿಸಿತ್ತು ಆದ್ದರಿಂದ ಇಲ್ಲಿ ಯಾವುದೇ ಚಿನ್ನದ ಗಣಿಗಾರಿಕೆ ನಡೆಯುತ್ತಿರಲಿಲ್ಲ ಎಂದು ಸುಡಾನ್ ಮೈನಿಂಗ್ ಕಂಪೆನಿ ಹೇಳಿಕೆ ನೀಡಿದೆ. ಆದರೆ ಚಿನ್ನದ ಆಸೆಯಿಂದಾಗಿ ಕೆಲವು ಸ್ಥಳಿಯರು ಆಗಾಗ ಇಲ್ಲಿ ಚಿನ್ನದ ಹುಡುಕಾಟ ನಡೆಸುತ್ತಿರುತ್ತಾರೆ ಆದ್ದರಿಂದ ಇಂಥ ಘಟನೆಗಳು ನಡೆಯುತ್ತಿರುತ್ತವೆ ಎಂದು ಗಣಿ ನಿರ್ವಾಹಕರು ಹೇಳಿಕೊಂಡಿದ್ದಾರೆ.

error: Content is protected !!