ವರದಿ: ರಮೇಶ್ ಗೌಡ, ಗುಬ್ಬಿ.
ಗುಬ್ಬಿ: ತಾಯಿ ತನ್ನ 6 ವರ್ಷದ ಹೆಣ್ಣು ಮಗುವಿಗೆ ವಿಷ ಉಣಿಸಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಗೆ ಬಿಗ್ ಟ್ವಸ್ಟ್ ಸಿಕ್ಕಿದೆ.
ತಾಲ್ಲೂಕಿನ ತ್ಯಾಗಟೂರು ಗೇಟ್ ನಿವಾಸಿ ಇಂದ್ರಮ್ಮ ತನ್ನ 6 ವರ್ಷದ ಮಗಳು ದೀಕ್ಷೀತಾಗೆ ವಿಷವುಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಳು. ಘಟನೆಯಲ್ಲಿ ದೀಕ್ಷಿತ ಮೃತಪಟ್ಟಿದ್ದು, ಇಂದ್ರಮ್ಮ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಜೀವನ್ಮರಣ ಹೋರಾಟ ನಡೆಸಿದ್ದಾಳೆ. ಈ ಬಗ್ಗೆ ಇಂದ್ರಮ್ಮಾಳ ಅತ್ತೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಯ ಬೆನ್ನುಹತ್ತಿದ ಗುಬ್ಬಿ ಪೊಲೀಸರಿಗೆ ಘಟನೆಯ ಸಂತ್ಯಾಂಶ ತಿಳಿದು ಬಂದಿದೆ.
ತಾಲ್ಲೂಕಿನ ಬೊಮ್ಮರಸನಹಳ್ಳಿ ಗ್ರಾಮದ ಯತೀಶ್ ಜೊತೆಗೆ ಇಂದ್ರಮ್ಮ ಎರಡನೇ ಸಂಸಾರ ಹೊಂದಿದ್ದರು. ಇವರಿಬ್ಬರ ಎರಡನೇ ಸಂಬಂಧಕ್ಕೆ ಯತೀಶ್ ಮೊದಲ ಪತ್ನಿ ವಿಜಯ ವಿರೋಧವಿತ್ತು. ಮೊದಲ ಪತ್ನಿಯ ಚಿತಾವಣೆಯಿಂದ ಬೇಸತ್ತ ಯತೀಶ್ ಇಂದ್ರಮ್ಮ ಹಾಗೂ ಆಕೆಯ 6 ವರ್ಷದ ಮಗಳು ದೀಕ್ಷಿತಾ ಗೆ ವಿಷವುಣಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಈ ಮೂವರ ಕೌಟುಂಬಿಕ ಕಲಹಕ್ಕೆ ಏನು ಅರಿಯದ ಮುಗ್ದ ಜೀವವೊಂದು ಉಸಿರು ಚೆಲ್ಲಿದೆ. ಗುಬ್ಬಿ ಪೊಲೀಸರು ಯತೀಶ ಹಾಗೂ ವಿಜಯಾಳನ್ನ ವಶಕ್ಕೆ ಪಡೆದಿದ್ದಾರೆ.ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.