10 ಕೋಟಿ ರೈತರ ಖಾತೆಗಳಿಗೆ ನಾಳೆ 20 ಸಾವಿರ ಕೋಟಿ ಬಿಡುಗಡೆ

ನವದೆಹಲಿ, ಡಿ 31:ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ 10 ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸಲಿದ್ದಾರೆ.

ನಾಳೆ ಮಧ್ಯಾಹ್ನ 12.30 ಕ್ಕೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ 10 ಕೋಟಿಗಿಂತಲೂ ಅಧಿಕ ಫಲಾನುಭವಿಗಳಿಗೆ ಸುಮಾರು 20 ಸಾವಿರ ಕೋಟಿ ರೂಪಾಯಿಯ ಆರ್ಥಿಕ ನೆರವನ್ನು ವರ್ಗಾಯಿಸಲಿದ್ದಾರೆ.

ದೇಶದ ಬಡ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದು ಪಿಎಂ-ಕಿಸಾನ್ ಯೋಜನೆಯ ಉದ್ದೇಶವಾಗಿದೆ. ತಲಾ 2 ಸಾವಿರ ರೂಪಾಯಿಯಂತೆ ೩ ಕಂತುಗಳಲ್ಲಿ ರೈತರಿಗೆ ಈ ನೆರವು ವರ್ಗಾವಣೆಯಾಗಲಿದೆ. ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.

ಇದುವರೆಗೆ 1 ಲಕ್ಷದ 60 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರಧಾನಿ ಅವರು, 351 ರೈತ ಉತ್ಪಾದಕ ಸಂಘಗಳಿಗೆ 14 ಕೋಟಿ ರೂಪಾಯಿಗೂ ಅಧಿಕ ಷೇರು ಹಣ ಬಿಡುಗಡೆ ಮಾಡಲಿದ್ದಾರೆ. ಇದರಿಂದ 1 ಲಕ್ಷದ 24 ಸಾವಿರ ರೈತರಿಗೆ ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಅವರು ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

error: Content is protected !!