ತುಮಕೂರು : ಅಪ್ರಾಪ್ತ ಬಾಲಕಿಯನ್ನ ಹೊರರಾಜ್ಯಕ್ಕೆ ಮಾರಾಟ ಮಾಡಿದ್ದ ಪ್ರಕರಣವನ್ನ ತುಮಕೂರು ಪೊಲೀಸರು ಭೇದಿಸಿ ಬಾಲಕಿಯನ್ನ ರಕ್ಷಿಸಿದ್ದಾರೆ.

ತುಮಕೂರು ನಗರದ ಹೊರವಲಯದ ದಿಬ್ಬೂರಿನ  ಚೌಡಯ್ಯ ದಂಪತಿಯ 11 ವರ್ಷದ ಹೆಣ್ಣು ಮಗುವನ್ನು ಆಂಧ್ರ ಪ್ರದೇಶಕ್ಕೆ ಮಾರಾಟ ಮಾಡಿದ್ದರು. ಬಾಲಕಿಯ ಚಿಕ್ಕಮ್ಮನ ಮನೆಯವರೇ ಆಂದ್ರದ ಬಾತುಕೋಳಿ ವ್ಯಾಪಾರಿಗೆ ಕೇವಲ 35,000 ರೂ. ಗಳಿಗೆ ಮಾರಾಟ ಮಾಡಿದ್ದರು‌ ಎಂದು ತಿಳಿದುಬಂದಿದೆ.

ಕಾರ್ಮಿಕ ಕಚೇರಿಗೆ ಬಂದಿದ್ದ ದೂರು ಆಧರಿಸಿ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಮಗುವಿನ ರಕ್ಷಣೆಗಾಗಿ ಕೋರಲಾಗಿತ್ತು. ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ತುಮಕೂರು ನಗರ ಪೋಲೀಸ್ ಠಾಣೆಯ ಸಿಬ್ಬಂದಿಗಳು ಮಗುವನ್ನು ರಕ್ಷಿಸಿ ಬಾಲ ಮಂದಿರಕ್ಕೆ ಹಾಜರುಪಡಿಸಿರುತ್ತಾರೆ.

ಕಾರ್ಯಚರಣೆಗೆ ಸಹಕರಿಸಿದ ಎಸ್ಪಿ, ಎಎಸ್ಪಿ, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಅಭಿನಂದಿಸಿದ್ದಾರೆ.

ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆ ಗೆ ಸಂಬಂಧಿಸಿದಂತೆ ದಿನೆ ದಿನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮಕ್ಕಳ ರಕ್ಷಣಾ ಇಲಾಖೆ ಈ ನಿಟ್ಟಿನಲ್ಲಿ ಜಾಗೃತವಾಗಬೇಕಿದೆ.

LEAVE A REPLY

Please enter your comment!
Please enter your name here