ತುಮಕೂರು: ಇಂದಿನ ವೈವಿಧ್ಯಮಯ ಜಗತ್ತಿನಲ್ಲಿ, ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವೆ ತಿಳುವಳಿಕೆ, ಮೆಚ್ಚುಗೆ ಮತ್ತು ಏಕತೆಯನ್ನು ಬೆಳೆಸುವಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಾಲೇಜು ಕ್ಯಾಂಪಸ್ ವಾತಾವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವೈವಿಧ್ಯತೆಯನ್ನು ಅನ್ವೇಷಿಸಲು ಮತ್ತು ಆಚರಿಸಲು ಹಾಗೂ ಪ್ರಜ್ಞೆಯನ್ನು ಉತ್ತೇಜಿಸಲು ಪ್ರಬಲ ವೇದಿಕೆಯನ್ನು ಒದಗಿಸುತ್ತವೆ. ಇಂತಹ ಅರ್ಥಪೂರ್ಣವಾದ ವೇದಿಕೆಯನ್ನು ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪಿಸಲಾಯಿತು.
ಕ್ಯಾಂಪಸ್ ಆವರಣದಲ್ಲಿ ಕಳೆದ ಸೋಮವಾರದಂದು ಆರಂಭಗೊಂಡ ಒಂದು ವಾರದ ಈ ವರ್ಣವೈಭಕ್ಕೆ ಇಂದು(ಶನಿವಾರ) ತೆರೆ ಎಳೆಯಲಾಯಿತು. ಎಲ್ಲ ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಂದೆಡೆ ಸೇರಿ ಬಣ್ಣ ಬಣ್ಣದ ವೇಷಣ-ಭೂಷಣದೊಂದಿಗೆ ವರ್ಣ ವೈಭವ-2024ಕ್ಕೆ ರಂಗು ತಂದರು.
ಹಸಿರ ಕ್ಯಾಂಪಸ್‍ನಲ್ಲಿ ಬಣ್ಣದ ರಂಗು :
ವಿಶಾಲವಾದ ಕ್ಯಾಂಪಸ್‍ನಲ್ಲಿ ವರ್ಣ ವೈಭವದ ಆರು ದಿನದಲ್ಲಿ ಕೆಂಪು ಗುಲಾಬಿ, ನೀಲಾಂಬರಿ, ಶ್ವೇತಾಂಬರಿ,ಸಂಪಿಗೆ, ಹಸಿರು ಬಣ್ಣದ ಶೀರ್ಷಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ವಿಶೇಷವಾದ ಉಡುಗೆ ತೊಟ್ಟು ಸಂಭ್ರಮಿಸಿದರು. ಕೊನೆಯ ದಿನ ರಂಗೀತರಂಗದ ಮೂಲಕ ನಡೆಸಿದ ಫ್ಯಾಷನ್ ಶೋ ಮತ್ತಷ್ಟು ಮೆರಗು ತಂದಿತು. ಅಲ್ಲದೆ ವಿದ್ಯಾರ್ಥಿಗಳಿಗಾಗಿ ಓಟದ ಸ್ಪರ್ಧೆ, ನೃತ್ಯ, ವಾಲಿಬಾಲ್, ತ್ರೋಬಾಲ್ ,ರಂಗೋಲಿ ಮೆಹಂದಿ, ಬೆಂಕಿಲ್ಲದ ಆಹಾರ ಸಿದ್ದಪಡಿಸಿದ ಅಹಾರ ಮೇಳ , ಚರ್ಚಾಸ್ವರ್ಧೆ, ಪ್ರಬಂಧ, ಕಬಡ್ಡಿ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ನೀಡಲಾಯಿತು. ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಬಹುಮಾನ ಗಳಿಸುವುದರ ಜೊತೆಗೆ ಸಂತೋಷದಲ್ಲಿ ಮಿಂದೆದ್ದರು.
ತರಗತಿ ಜೊತೆಗೆ ಹಾಡು-ನೃತ್ಯ :
ಬೆಳಿಗ್ಗೆ ಕಾಲೇಜಿನಲ್ಲಿ ತರಗತಿ ಮುಗಿಸಿ ಮಧ್ಯಾಹ್ನ ನಂತರ ಕಲೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡು ಸೊಗಸಾಗಿ ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಯನ್ನು ತಂದರು. ಎಲ್ಲಾ ವಿಭಾಗದ ಮುಖ್ಯಸ್ಥರು ಭೋದಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಹಳ ಸಂತೋಷದಿಂದ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತ ಪಿ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಇಂದಿನ ಯುವಜನತೆಗೆ ಪರಿಚಯಿಸುವ ವರ್ಣವೈಭವ ಅರ್ಥಪೂರ್ಣವಾಗಿದೆ. ಶೈಕ್ಷಣಿಕ ಕಾಲಘಟ್ಟದಲ್ಲಿ ಪಠ್ಯದ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿ ನಮ್ಮನ್ನು ಹೆಚ್ಚು ಸಕ್ರಿಯರಾಗಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾತ್ಮಕ ಯೋಚನೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ ಎಂದರು.
ಕಾಲೇಜಿನ ಸಾಂಸ್ಕøತಿಕ ಕಾರ್ಯದರ್ಶಿಗಳಾದ ಡಾ. ರಮೇಶ್ ಮಣ್ಣೆ, ಐಕ್ಯೂಎಸ್ಸಿ ವಿಭಾಗದ ವಿಭಾಗದ ಮುಖ್ಯಸ್ಥರಾದ ಸಯ್ಯದ್ ಬಾಬು ಎಚ್.ಬಿ, ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ವರ್ಣವೈಭವ ಕಾರ್ಯಕ್ರಮದ ವಿವಿಧ ಕಾರ್ಯಕ್ರಮಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.