ತಿಪಟೂರು: ಮಹಾನವಮಿ ಮಂಟಪದ ಬಳಿ ಎರಡರಿಂದ ಮೂರು ತಿಂಗಳ ಮಗುವೊಂದು ಪತ್ತೆಯಾಗಿದೆ, ಪೋಷಕರೇ ಮಗುವನ್ನ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಾಲೂಕಿನ ಹೆಡಗರಹಳ್ಳಿ ಗ್ರಾಮದ ಮಹಾನವಮಿ ಮಂಟಪದಲ್ಲಿ ನವಜಾತ ಶಿಶು ಪತ್ತೆಯಾಗಿದ್ದು ಗ್ರಾಮದ ನಿವಾಸಿ ಆಶಾ ಕಾರ್ಯಕರ್ತೆ ಕಲಾವತಿ ಎಂಬುವರು ವಾಕಿಂಗ್ ಮಾಡುವ ಸಂದರ್ಭದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದೆ, ನಂತರ ಮಂಟಪದ ಬಳಿ ಧಾವಿಸಿದಾಗ ಸುಮಾರು ಎರಡರಿಂದ ಮೂರು ತಿಂಗಳ ಶಿಶು ಕಂಡು ಬಂದಿದೆ.

ಮಗುವನ್ನ ಕಂಡ ಆಶಾಕಾರ್ಯಕರ್ತೆ ತಕ್ಷಣವೇ ನೊಣವಿನಕೆರೆ ಪೊಲೀಸ್ ಠಾಣೆ ಹಾಗೂ 108 ಆಂಬುಲೆನ್ಸ್ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಬಳಿಕ 108 ಆಂಬುಲೆನ್ಸ್ ನಲ್ಲಿ ಮಗುವನ್ನ ಸಾರ್ವಜನಿಕ ಆಸ್ಪತ್ರೆಗೆ ತಿಪಟೂರುಗೆ ದಾಖಲು ಮಾಡಿದ್ದಾರೆ. ಮಗು ಆರೋಗ್ಯವಾಗಿದ್ದು ಸುಮಾರು 4.5 ಕೆಜಿ ತೂಕವಿದೆ ಎಂದು ಮಗುವಿಗೆ ಚಿಕಿತ್ಸೆ ನೀಡಿದ ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞೆ ಶೀರಿಷ ವರದಿ ನೀಡಿದ್ದಾರೆ.

ಸದ್ಯ ಮಗುವನ್ನ ಮಕ್ಕಳ ರಕ್ಷಣಾ ಇಲಾಖೆ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.ಜಿಲ್ಲೆಯಲ್ಲಿ ಇತ್ತೀಚೆಗೆ ಮಕ್ಕಳ ಅಪಹರಣ, ಬೀದಿಯಲ್ಲಿ ಬಿಸಾಡಿ ಹೋಗುವುದು ಸೇರಿದಂತೆ ಅನೇಕ ರೀತಿಯ ಚಿಕ್ಕ ಮಕ್ಕಳ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಮಕ್ಕಳ ರಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here