ತುರುವೇಕೆರೆ ಪಟ್ಟಣದ ಸಬ್ಇನ್ಸ್ಪೆಕ್ಟರ್ ವಿರುದ್ಧದ ಆರೋಪಗಳಿಗೆ ಹುರುಳಿಲ್ಲ.

“ದಕ್ಷ ಅಧಿಕಾರಿಯ ವರ್ಗಾವಣೆಗೆ ಪ್ರಯತ್ನಪಟ್ಟರೆ ಪ್ರತಿಭಟನೆಯ ಎಚ್ಚರಿಕೆ: ದ.ಸಂ.ಸ”.

ತುರುವೇಕೆರೆ: ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ . ಪಟ್ಟಣದ ಸಬ್ ಇನ್ಸ್ ಪೆಕ್ಟರ್ ಕೇಶವಮೂರ್ತಿ ತಾಲೂಕಿನ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದು ನೊಂದ ಹಾಗೂ ಅನ್ಯಾಯಕ್ಕೊಳಗಾದ ವ್ಯಕ್ತಿಗಳಿಗೆ ನ್ಯಾಯ ದೊರಕಿಸುವ ಮೂಲಕ ಜನಸ್ನೇಹಿ ಅಧಿಕಾರಿಯಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಹಿರಿಯ ದಲಿತ ಮುಖಂಡರಾದ ಬೀಚನಹಳ್ಳಿ ರಾಮಣ್ಣನವರು ಮಾತನಾಡಿ ಪಟ್ಟಣದ ಸಬ್ ಇನ್ಸ್ಪೆಕ್ಟರ್ ಇಸ್ಪೀಟು, ಮಟ್ಕಾ, ಮರಳು ದಂಧೆ,ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಿಸುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುವ ಅಧಿಕಾರಿಯಾಗಿದ್ದಾರೆ. ಬಡವರು, ದೀನ-ದಲಿತರ, ಸಮಸ್ಯೆಗೆ ಸ್ಪಂದಿಸಿ ಮುಂದ ಜನತೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ದಕ್ಷ ಅಧಿಕಾರಿಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ. ಕೆಲವರ ಖಾಜಿ ನ್ಯಾಯದ ಬೇಳೆ ಬೇಯಿಸಲು ಮನ್ನಣೆ ನೀಡದಿರುವುದು ಈ ಆರೋಪಗಳಿಗೆ ಕಾರಣವಾಗಿದೆ ಇದರಿಂದ ಕೆಲವರಿಗೆ ಉತ್ಪ್ರೇಕ್ಷೆ ಯಾಗಿದೆ. ಅಲ್ಲದೇ ಇಂತಹ ದಕ್ಷ ಅಧಿಕಾರಿಯ ವರ್ಗಾವಣೆಗೆ ಪ್ರಯತ್ನಪಟ್ಟರೆ ನಮ್ಮ ಸಂಘಟನೆಗಳು ಸಬ್ ಇನ್ಸ್ ಪೆಕ್ಟರ್ ಪರವಾಗಿ ಅವರನ್ನು ಉಳಿಸಿಕೊಳ್ಳಲು ಪ್ರತಿಭಟನೆ ಮಾಡುವುದು ಅಗತ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.

ದಲಿತ ಮುಖಂಡರಾದ ಮಲ್ಲೂರು ತಿಮ್ಮೇಶ್ ಮಾತನಾಡಿ, ಪಟ್ಟಣದ ಸಬ್ ಇನ್ಸ್ ಪೆಕ್ಟರ್ ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿದ್ದು ಅವರ ವಿರುದ್ಧ ಕೆಲವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು. ಕೆಲವರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು. ಅಲ್ಲದೇ ಆರೋಪ ಮಾಡಿರುವವರು ಆರೋಪದ ಬಗ್ಗೆ ಸಾಕ್ಷಾಧಾರದ ಸ್ಪಷ್ಟತೆ ನೀಡಲಿ ಎಂದು ಪ್ರಶ್ನಿಸಿದರು? ಇಂತಹ ಅಧಿಕಾರಿಯ ವರ್ಗಾವಣೆಗೆ ಮುಂದಾದರೆ ನಮ್ಮ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪುರದ ರಾಮಯ್ಯ ಹಾಗೂ ಜಗದೀಶ್ ಮಾತನಾಡಿ ಕಸಬಾ ಹೋಬಳಿಯ ಪುರ ಗ್ರಾಮದ ಶಾಲಾ ಆವರಣದಲ್ಲಿ ರಾತ್ರಿ ವೇಳೆ ಕುಡಿದು ಅಸಭ್ಯವಾಗಿ ವರ್ತಿಸುತ್ತಿರುವ ಅವರ ಬಗ್ಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಂಡಂತಹ ಅಧಿಕಾರಿಯಾಗಿದ್ದಾರೆ. ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವುದು ತಪ್ಪೇ? ಎಂದು ಪ್ರಶ್ನಿಸಿದರು. ಇಂತಹ ಅಧಿಕಾರಿಯ ಬಗ್ಗೆ ಇಲ್ಲಸಲ್ಲದ ಆರೋಪಗಳು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದ.ಸಂ.ಸ ಪದಾಧಿಕಾರಿಗಳಾದ ದಂಡಿನಶಿವರ ಕುಮಾರ್. ಮಾ.ಜಿ.ಪಂ.ಸದಸ್ಯ ಹನುಮಂತಯ್ಯ. ಗುರುದತ್. ಹೊನ್ನೇನಹಳ್ಳಿ ಕೃಷ್ಣ. ರಾಮಚಂದ್ರು. ಕೃಷ್ಣಸ್ವಾಮಿ. ಪುಟ್ಟರಾಜು. ತೋವಿನಕೆರೆ ರಂಗಸ್ವಾಮಿ. ಶಿವರಾಜು. ಶೇಖರ್. ಬಿಗನೇನಹಳ್ಳಿ ಪುಟ್ಟರಾಜು. ಟಿ.ಬಿ.ಕ್ರಾಸ್ ಗೋವಿಂದರಾಜು (ಗೋವಿ) ಸೇರಿದಂತೆ ಮುಂತಾದ ಹಲವು ಮುಖಂಡರು ಪಾಲ್ಗೊಂಡಿದ್ದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!