ಗುಬ್ಬಿ. ವಿದ್ಯುತ್ ಸ್ಪರ್ಶಸಿ ಮತ್ತಿಕೆರೆ ಗ್ರಾಮದ ಯುವಕ ಸಾವು.

ಗುಬ್ಬಿ ತಾಲ್ಲೂಕಿನ ಮತ್ತಿಕೆರೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಇಂದು ಜರುಗಿದೆ.

ಇಂದು ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಆಳವಡಿಸಿರುವ ಮೋಟಾರ್ ಸ್ವೀಚ್ ಹಾಕಿ ನೀರು ಹಾಯಿಸಲು ಹೋದ ಸಮಯದಲ್ಲಿ ಜರುಗಿದ ಘಟನೆಯಾಗಿದ್ದು ಮೃತ ಯುವಕನನ್ನು ಸಿ.ಎಸ್.ಪುರ ಹೋಬಳಿಯ ಮತ್ತಿಕೆರೆ ಗ್ರಾಮದ ರವಿ(26)ವರ್ಷ ಎಂದು ಗುರುತಿಸಲಾಗಿದ್ದು.

ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

error: Content is protected !!