ಗುಬ್ಬಿ. ಪತ್ರಕರ್ತರಿಗೆ ಮತ್ತು ವಿತರಕರಿಗೆ ಆಹಾರದ ಕಿಟ್ ವಿತರಿಸಿದ ಗುಬ್ಬಿ ಠಾಣೆ ಪಿಎಸ್ಐ ಜ್ಞಾನ ಮೂರ್ತಿ

ತಾಲೂಕಿನ ಪತ್ರಕರ್ತರು ಹಾಗೂ ವಿತರಕರು ಕೋವಿಡ್ ಸಂಕಷ್ಟಸಮಯದಲ್ಲಿ ಇದು ಅವರಿಗೆ ಸಹಾಯವಾಗಲಿ ಎಂದು ನನ್ನ ಇಲಾಖೆಯಿಂದ ಆಹಾರದ ಕಿಟ್ ನೀಡುತ್ತಿದ್ದೇವೆ ಇದರಿಂದ ಸಮಾಜದಲ್ಲಿ ಜನತೆಯ ಆರೋಗ್ಯದ ದೃಷ್ಟಿಯಿಂದ ಹಗಲಿರುಳು ಸೇವೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಹಾಗೂ ಪತ್ರಕರ್ತರನ್ನು ಗುರುತಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಗುಬ್ಬಿ ಸಬ್ಇನ್ಸ್ಪೆಕ್ಟರ್ ಜ್ಞಾನಮೂರ್ತಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಅಧಿಕಾರಿಗಳು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಹಾಗೂ ವಿತರಕರಿಗೆ ಈ ರೀತಿ ಸಹಾಯ ಮಾಡುವುದು ಪ್ರತಿಯೊಬ್ಬ ಇಲಾಖೆಯ ಅಧಿಕಾರಿಗಳ ಕರ್ತವ್ಯ ಎಂದು ತಿಳಿಸಿದವರು ಪ್ರತಿಯೊಬ್ಬರೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮನಸ್ಸು ಮಾಡಬೇಕಷ್ಟೇ ಅದೇ ರೀತಿಯಲ್ಲಿ ಪಿ ಎಸ್ ಐ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಹಾಗೂ ವಿತರಕರಿಗೆ ಆಹಾರದ ಗುಬ್ಬಿ ಠಾಣೆಯ ಎದುರು ಠಾಣಾಧಿಕಾರಿ ಜ್ಞಾನಮೂರ್ತಿ ಹಾಗೂ ಸಿಬ್ಬಂದಿ ವರ್ಗ ಆಹಾರದ ಕಿಟ್ ನೀಡಿದರು.

ಪತ್ರಕರ್ತರ ಕಾರ್ಯದರ್ಶಿ ಮಾತನಾಡಿ ಸಮಾಜದಲ್ಲಿ ಪ್ರತಿನಿತ್ಯವೂ ಹಾಗೂ ಅವುಗಳ ಸುದ್ದಿಗಳನ್ನು ಬಿತ್ತರಿಸುವ ಹಾಗೂ ಮನೆಮನೆಗೂ ಪತ್ರಿಕೆಗಳನ್ನು ತಲುಪಿಸುವ ವ್ಯಕ್ತಿಗಳನ್ನು ಗುರುತಿಸಿ ಇರುವುದು ತುಂಬಾ ಶ್ಲಾಘನೀಯ ಎಂದು ತಿಳಿಸಿ ಇದರಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸುವಂತಹ ಗುಬ್ಬಿ ಠಾಣ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು ಈ ಸಂದರ್ಭದಲ್ಲಿ ಎ ಎಸ್ ಐ ಶಿವಣ್ಣ ಸಿದ್ದರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!