ಗುಬ್ಬಿ.ಜೆಡಿಎಸ್ ಪಕ್ಷ ಸಂಘಟನೆ ಗೆ ಹೆಚ್ಚಿನ ಒತ್ತು. ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನಿದರ್ಶನದಂತೆ ಜೆಡಿಎಸ್ ಪಕ್ಷದ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ದಿ.25ರಂದು ನೆಡೆಯಲಿದ್ದು ಕಾರ್ಯಕ್ರಮದ ಯಶಸ್ವಿಗೆ ತಾಲ್ಲೂಕಿನ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಸಹಕರಿಸಬೇಕೆಂದು ಗುಬ್ಬಿ ಜೆಡಿಎಸ್ ಮುಖಂಡ ಬಿ.ಎಸ್. ನಾಗರಾಜು ತಿಳಿಸಿದರು.

ಗುಬ್ಬಿ ಪಟ್ಟಣದ ನೂತನ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ದಿ.25 ಸಮಾವೇಶದ ಕುರಿತು ಮಾತನಾಡಿದ ಅವರು ಕಾರ್ಯಕ್ರಮ ಕ್ಕೆ ರಾಜ್ಯ ದ ನಾಯಕರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ತುಮಕೂರು ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರ. ಮಾಜಿ ಶಾಸಕರು ಮುಖಂಡರು ಮತ್ತು ಗುಬ್ಬಿ ಶಾಸಕ ಎಸ್. ಆರ್.ಶ್ರೀ ನಿವಾಸ್ ಭಾಗವಹಿಸುವರು.ಎಂದು ತಿಳಿಸಿದರು.

ಕುಮಾರಸ್ವಾಮಿಯವರ ಆಡಳಿತದ ಕಾರ್ಯವೈಖರಿ ಮೆಚ್ಚುಗೆ.ಕುಮಾರಸ್ವಾಮಿ ಯವರು ಆಡಳಿತ ಆವಧಿಯಲ್ಲಿ ರೈತ ಪರ.ಜನ ಪರ ಯೋಜನೆಗಳು ರೈತರ ಸಾಲಮನ್ನಾ ಇನ್ನೂ ಹಲವು ಯೋಜನೆಗಳು ನಮಗೆ ಸ್ಪೂರ್ತಿ ಧಾಯಕವಾಗಿ ಜೆಡಿಎಸ್ ಪಕ್ಷದಗ ಸಿದ್ದಾಂತಗಳನ್ನು ಮೆಚ್ಚಿ ಪಕ್ಷ ಕ್ಕೆ ಸೇರ್ಪಡೆ ಯಾಗುತ್ತಿದ್ದೇವೆ ಇದರೊಂದಿಗೆ ಹಲವು ಪಕ್ಷದ ಮೂಖಂಡರು ಸಹ ಜೆಡಿಎಸ್ ಪಕ್ಷ ಸೇರ್ಪಡೆ ಯಾಗುತ್ತಿದ್ದವೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತಾಲೂಕಿನಾದ್ಯಂತ ಪಕ್ಷದ ಸಂಘಟನೆ ಗೆ ಹೆಚ್ಚು ಒತ್ತು ನೀಡುವ ಜೋತೆಗೆ ಮುಂದಿನ ಚುನಾವಣೆ ಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಕ್ಕೆ ತರುವಲ್ಲಿ ಶ್ರಮವಹಿಸಲಾಗುವುದು ಎಂದರು.

ಸಮಾವೇಶಕ್ಕೆ ಸುಮಾರು ಹದಿನೈದು ಸಾವಿರ ಜನ ಸೇರುವ ನಿರೀಕ್ಷೆ. ಕಾರ್ಯಕ್ರಮಕ್ಕೆ ರಾಜ್ಯದ ನಾಯಕರು ಭಾಗವಹಿಸುವುದರಿಂದ ತಾಲೂಕಿನ ಎಲ್ಲಾ ಜೆಡಿಎಸ್ ಕಾರ್ಯಕರ್ತರು.ಸುಮಾರು ಹದಿನೈದು ಸಾವಿರ ಕಾರ್ಯಕರ್ತರು ಭಾಗವಹಿಸುವರು.ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಗೋಸಲ ಚನ್ನಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಂತರ ನಮ್ಮ ಕಛೇರಿಯ ಉಧ್ಘಾಟನೆ ನೇರವೇರಿಸಿ ನಂತರ ಬೈಕ್ ರ್ಯಾಲಿ ಮೂಲಕ ಸಮಾವೇಶದಲ್ಲಿ ಭಾಗವಹಿಸುವರು ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಭಾಗವಹಿಸುವ ಸಮಾವೇಶದ ಯಶಸ್ವಿ ಗೆ ಸಹಕಾರ ನೀಡುವಂತೆ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಶಿವಲಿಂಗಯ್ಯ.ಸುರೇಶ್ ಗೌಡ.ದಿಲೀಪ್.ಪ್ರಕಾಶ್. ಗಂಗಣ್ಣ.ಹಾಗೂ ಇತರರು ಭಾಗ ವಹಿಸಿದ್ದರು.

error: Content is protected !!