ಉಪಚುನಾವಣೆ ಫಲಿತಾಂಶ : ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ – The Newz Peg

ಬೆಂಗಳೂರು : ಭಾರೀ ಜಿದ್ದಾ ಜಿದ್ದೆಗೆ ಕಾರಣವಾಗಿದ್ದ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಮತಏಣಿಕೆ ಕಾರ್ಯ ಆರಂಭವಾಗಿದೆ.

ಈ ಎರಡೂ ಕ್ಷೇತ್ರಗಳು ಆಡಳಿತರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿವೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಯ ಹಾವು ಏಣಿ ಆಟಆಡುತ್ತಿದ್ದು,ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೋರಾಟ ನಡೆಯುತ್ತಿದೆ. ಅಂತಿಮವಾಗಿ ಯಾರು ಜಯಶಾಲಿಗಳಾಗುತ್ತಾರೆ ಎನ್ನುವುದು ಇನ್ನು ಕೆಲವೇ ಹೊತ್ತಲ್ಲಿ ಘೋಷಣೆಯಾಗಲಿದೆ.

ಇವೆಲ್ಲದರ ನಡೆವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಮೊಕ್ಕಾಂದ ಹೂಡಿದ್ದು, ಟಿವಿ ನೋಡುವುದರಲ್ಲಿ ತಲ್ಲೀನರಾಗಿದ್ದಾರೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ.

error: Content is protected !!